1. ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (ಜೀವವಿಮೆ):

  • ಕೇಂದ್ರ ಸರ್ಕಾರದಿಂದ ಪ್ರಾಯೋಜಿತವಾದ ಯೋಜನೆ.
  • NATIONAL INSURANCE PVT LTD ನವರ ಸಹಯೋಗದೊಂದಿಗೆ ನೀಡುತ್ತಿದ್ದೇವೆ.
  • ಬ್ಯಾಂಕಿನ ಎಲ್ಲಾ ಉಳಿತಾಯ ಖಾತೆದಾರರಿಗೆ ಈ ಸೌಲಭ್ಯ ಲಭ್ಯವಿರುತ್ತದೆ.
  • 18 ರಿಂದ 50 ವರ್ಷದೊಳಗಿನ ಎಲ್ಲಾ ವ್ಯಕ್ತಿಗಳು ಈ ಯೋಜನೆಯಡಿಯಲ್ಲಿ ನೋಂದಾವಣೆ ಮಾಡಿಕೊಳ್ಳಬಹುದು.
  • 55 ವರ್ಷದವರೆಗೂ ರೂ. 2.00 ಲಕ್ಷ ವಿಮಾ ರಕ್ಷಣೆ ಇರುತ್ತದೆ.
  • ವಾರ್ಷಿಕ ಪ್ರೀಮಿಯಂ ಮೊತ್ತ ಕೇವಲ ರೂ. 436/- ಆಗಿರುತ್ತದೆ.
  • ಸಹಜ ಸಾವಿಗೆ ರೂ. 2 ಲಕ್ಷದವರೆಗೆ ಜೀವವಿಮಾ ಮೊತ್ತ ದೊರೆಯುತ್ತದೆ.
  • ವರ್ಷ ಮೇ 31 ರ ಒಳಗೆ ಪ್ರೀಮಿಯಂ ಮೊತ್ತವನ್ನು ತಮ್ಮ ಉಳಿತಾಯ ಖಾತೆಯಿಂದ ನೇರವಾಗಿ ವರ್ಗಾವಣೆ (Auto Debit) ಮಾಡಿಕೊಳ್ಳಲಾಗುತ್ತದೆ.
  • 2023 - 24 ನೇ ಸಾಲಿಗೆ ಸದಸ್ಯರು (4 ಜನರನ್ನು ಒಳಗೊಂಡಿರುವ ಕುಟುಂಬ) ರೂ. 1000 ಗಳನ್ನು ನೋಂದಾವಣಿ / ನವೀಕರಣದ ಅವಧಿಯಲ್ಲಿ ಪಾವತಿಸಬೇಕು.( 4 ಕ್ಕಿಂತ ಹೆಚ್ಚು ಜನರನ್ನು ಒಳಗೊಂಡಿರುವ ಕುಟುಂಬವು ಹೆಚ್ಚುವರಿ ವ್ಯಕ್ತಿಗೆ ರೂ 200 ಪಾವತಿ ಮಾಡಬೇಕು)


2. ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಅಪಘಾತ ವಿಮೆ):

  • ಕೇಂದ್ರ ಸರ್ಕಾರದಿಂದ ಪ್ರಾಯೋಜಿತವಾದ ಯೋಜನೆ.
  • ಬಜಾಜ್ ಅಲಯನ್ಸ್ ಜನರಲ್ ಇನ್ಶೂರೆನ್ಸ್ ಕಂಪನಿ ಲಿ., ನವರ ಸಹಯೋಗದೊಂದಿಗೆ ನೀಡುತ್ತಿದ್ದೇವೆ.
  • ಬ್ಯಾಂಕಿನ ಎಲ್ಲಾ ಉಳಿತಾಯ ಖಾತೆದಾರರಿಗೆ ಈ ಸೌಲಭ್ಯ ಲಭ್ಯವಿರುತ್ತದೆ. 18 ರಿಂದ 70 ವರ್ಷದೊಳಗಿನ ಎಲ್ಲಾ ವ್ಯಕ್ತಿಗಳು ಈ ಯೋಜನೆಯಡಿಯಲ್ಲಿ ನೋಂದಾವಣೆ ಮಾಡಿಕೊಳ್ಳಬಹುದು.
  • ವಾರ್ಷಿಕ ಪ್ರೀಮಿಯಂ ಮೊತ್ತ ಕೇವಲ ರೂ.20/- ಆಗಿರುತ್ತದೆ.
  • ಅಪಘಾತದಲ್ಲಿ ಸಾವು ಸಂಭವಿಸಿದರೆ ವಿಮಾ ಮೊತ್ತ ರೂ. 2 ಲಕ್ಷಗಳನ್ನು ನೀಡಲಾಗುತ್ತದೆ.
  • ಅಪಘಾತದಿಂದ ಶಾಶ್ವತವಾಗಿ ಕಣ್ಣು, ಕೈ, ಕಾಲು ಕಳೆದುಕೊಂಡು ಸಂಪೂರ್ಣ ವಿಕಲಚೇತನರಾದರೂ ರೂ. 2 ಲಕ್ಷ ಪರಿಹಾರ ದೊರೆಯುತ್ತದೆ.
  • ಅಪಘಾತದಲ್ಲಿ ಒಂದು ಕಣ್ಣು, ಒಂದು ಕೈ ಇಲ್ಲವೇ ಒಂದು ಕಾಲನ್ನು ಕಳೆದುಕೊಂಡರೆ ರೂ. 1 ಲಕ್ಷದವರೆಗೆ ವಿಮಾ ಪರಿಹಾರ ಲಭ್ಯವಿದೆ.
  • ಪ್ರತಿ ವರ್ಷ ಮೇ 31 ರ ಒಳಗೆ ಪ್ರೀಮಿಯಂ ಮೊತ್ತವನ್ನು ತಮ್ಮ ಉಳಿತಾಯ ಖಾತೆಯಿಂದ ನೇರವಾಗಿ ವರ್ಗಾವಣೆ (Auto Debit) ಮಾಡಿಕೊಳ್ಳಲಾಗುತ್ತದೆ.

3. ಯಶಶ್ವಿನಿ ನಗರ ಸಹಕಾರಿಗಳ ಆರೋಗ್ಯ ರಕ್ಷಣಾ ಯೋಜನೆ :

  • ಈ ಯೋಜನೆಯು ರಾಜ್ಯ ಸರ್ಕಾರದ ಪ್ರಾಯೋಜಕತ್ವವನ್ನು ಹೊಂದಿರುತ್ತದೆ.
  • ಬ್ಯಾಂಕಿನ ಸದಸ್ಯರಾಗಿ 3 ತಿಂಗಳು ಆಗಿರಬೇಕು.
  • ಹುಟ್ಟಿದ ಮಗುವಿನಿಂದ ಹಿಡಿದು ಕುಟುಂಬದ ಎಲ್ಲಾ ವಯಸ್ಸಿನ ಸದಸ್ಯರು ಇದರ ಪ್ರಯೋಜನ ಪಡೆಯಬಹುದು.
  • ಯಶಸ್ವಿನಿ ಯೋಜನೆ 823 ಶಸ್ತ್ರ ಚಿಕಿತ್ಸೆಗಳಿಗೆ ಅನ್ವಯವಾಗುತ್ತದೆ.
  • ಯಶಸ್ವಿನಿ ಟ್ರಸ್ಟಿನಿಂದ ರಾಜ್ಯಮಟ್ಟದಲ್ಲಿ ಅಂಗೀಕರಿಸಿದ ಒಟ್ಟು 572 (ಬೆಂಗಳೂರು ನಗರದಲ್ಲಿ 68) ಆಸ್ಪತ್ರೆಗಳಲ್ಲಿ ಮಾತ್ರ ನಿಗದಿತ ಮಿತಿಯೊಂದಿಗೆ ನಗದು ರಹಿತವಾಗಿ ಸೌಲಭ್ಯ ಪಡೆಯಲು ಅವಕಾಶವಿರುತ್ತದೆ.
  • ಯಶಸ್ವಿನಿ ಯೋಜನೆಯಲ್ಲಿ, ಆ ವರ್ಷದ ಯೋಜನಾ ಅವಧಿಯಲ್ಲಿ ಪ್ರತಿ ಸದಸ್ಯನು ಶಸ್ತ್ರ ಚಿಕಿತ್ಸೆಗಳಿಗೆ ಒಂದು ಬಾರಿ ದಾಖಲಾತಿಗೆ (Single Admission) ಗರಿಷ್ಠ ಮಿತಿ ರೂ. 1.75 ಲಕ್ಷಗಳು.
  • ಒಂದಕ್ಕಿಂತ ಹೆಚ್ಚು ಬಾರಿ ದಾಖಲಾದಲ್ಲಿ (Multiple Admission) ಗರಿಷ್ಠ ಮಿತಿ ರೂ. 2.50 ಲಕ್ಷಗಳು.
  • ಸದಸ್ಯರು ಬೇರೆ ಯಾವುದೇ ವಿಮಾ ಸಂಸ್ಥೆಯಲ್ಲಿ ಆರೋಗ್ಯ ವಿಮೆಯನ್ನು ಮಾಡಿಸಿರಬಾರದು.
  • ಸದಸ್ಯರು ಸರ್ಕಾರಿ ನೌಕಾರರಾಗಿರಬಾರದು ಹಾಗೂ ಇ.ಎಸ್.ಐ (ESI) ಸದಸ್ಯನಾಗಿರಬಾರದು.
  • 2023 - 24 ನೇ ಸಾಲಿಗೆ ಪ್ರತಿ ವ್ಯಕ್ತಿಯು ರೂ. 1000 ಗಳನ್ನು ನೋಂದಾವಣಿ / ನವೀಕರಣದ ಅವಧಿಯಲ್ಲಿ ಪಾವತಿಸಬೇಕು. ( 4 ಕ್ಕಿಂತ ಹೆಚ್ಚು ಜನರನ್ನು ಒಳಗೊಂಡಿರುವ ಕುಟುಂಬವು ಹೆಚ್ಚುವರಿ ವ್ಯಕ್ತಿಗೆ ರೂ 200 ಪಾವತಿ ಮಾಡಬೇಕು)
  • ಪ್ರತಿ ವರ್ಷ ಮೇ 31 ರ ಒಳಗೆ ಈ ಯೋಜನೆಯನ್ನು ನವೀಕರಿಸಬೇಕು.
  • ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ವೆಬ್ ಸೈಟನ್ನು ಸಂಪರ್ಕಿಸಬಹುದು.

Website : www.yeshasvini.kar.nic.in
Email : yeshtrust@gmail.com
Phone No : 080- 26783111, 080- 26784111,
Fax. No : 080-26782622.
Co-Ordinator : 9342391291 (Venkoba Rao)