ಜನರ ಆರ್ಥಿಕ ಅಭಿವೃದ್ಧಿಗಾಗಿ ಪಣ ತೊಟ್ಟ ಹಲವು ಗಣ್ಯ ವ್ಯಕ್ತಿಗಳಲ್ಲಿ ಏಕ ಮನಸ್ಸಿನ ವ್ಯಕ್ತಿಗಳಾದ ಅಂದಿನ ಮೇಯರ್ ಆದ ಮಾನ್ಯ ಶ್ರೀ. ಟಿ.ಡಿ ನಾಗಣ್ಣನವರು, ಶ್ರೀ. ಪಿ.ವಿ ರಾಮಚಂದ್ರರವರು, ಶ್ರೀ. ವಾದಿರಾಜರವರು, ಶ್ರೀ. ಪಿ.ವಿ. ಗುಂಡಪ್ಪರವರು ಮತ್ತು ಹಲವು ಗಣ್ಯ ನಾಗರೀಕರು ಒಂದೆಡೆ ಸೇರಿ ಅಶೋಕನಗರ ಬಡಾವಣೆಯ ಜನರನ್ನು, ಚೀಟಿ ನಡೆಸುವವರು ಮತ್ತು ಲೇವಾದೇವಿದಾರರ ಹಿಡಿತದಿಂದ ಹೊರತರುವ ಸದುದ್ದೇಶದಿಂದ 1973 ರಲ್ಲಿ ಬಡಾವಣೆಯ ಜನರಿಂದ ಷೇರು ಮೊತ್ತವನ್ನು ಸಂಗ್ರಹಿಸಿದರು, ಸಂಗ್ರಹವಾದ ರೂ.ಎರಡು ಲಕ್ಷ ಷೇರು ಬಂಡವಾಳದಿಂದ ಅಶೋಕನಗರ ಸಹಕಾರ ಬ್ಯಾಂಕನ್ನು ಪ್ರಾರಂಭಿಸಿದರು. ಪ್ರಾರಂಭದಿಂದಲೇ ಬಡಾವಣೆಯ ಜನರಿಗೆ ಸಂಘದಿಂದ ನೀಡುವ ಸೌಲಭ್ಯದ ಬಗ್ಗೆ ತಿಳುವಳಿಕೆ ಮೂಡಿಸುತ್ತಾ ಚೀಟಿ ಮತ್ತು ಲೇವಾದೇವಿದಾರರ ಕಪಿಮುಷ್ಟಿಯಿಂದ ಹೊರತರುವ ಪ್ರಯತ್ನ ಮಾಡಲಾಯಿತು .